ಆಳುವವರ ಅಶ್ವಮೇಧ

ನಡೆಸಿದ್ದಾರೆ ನಮ್ಮ ಪ್ರಭುಗಳು
ಅಶ್ವಮೇಧ ಯಾಗವೊಂದು
ಇಡಿಸಿದ್ದಾರೆ ತಾವು ಬಿಟ್ಟ ಅಶ್ವಕ್ಕೆ

ಕಡಿವಾಣವಿಲ್ಲದ ಬೆಲೆಯೆಂದು
ಉಬ್ಬಿ ನೆಗೆದು ನಾಗಾಲೋಟದಿ ಓಡಿದೆ
ಮಿಂಚಂಗೆ ಮೈಕೊಬ್ಬಿದೆ

ಯಾಗಕ್ಕೆಂದು ಬಿಟ್ಟ ಭೂಪನಾರು ?
ಕಟ್ಟಿ ಕೆಡವುವವೆಂದು ಕೊಚ್ಚಿಕೊಂಡವರು
ತಟ್ಟಿ ಇದರ ಬೆನ್ನ ತಾವೇ  ಮೆಚ್ಚಿಕೊಂಡರು .
ಎದುರಾದವರೇ ಇಲ್ಲ ;
ಬದುಕಿದೆಯಾ ಬಡಜೀವವೇ
ಎಂದು ಓಡಿದ ಉತ್ತರಕುಮಾರರೇ ಎಲ್ಲ

ಲಗಾಮಿಲ್ಲದ ಕುದುರೆ
ದೀನರ ಗೋಣ ಮೆಟ್ಟಿ ನಡದಿದೆ
ಹಿಂದೆ ಬರುವ ಹಿಂಬಾಲಕರು
ಕಪ್ಪಕಾಣಿಕೆಗಳ ಗಳಿಸುತ್ತಾ
ಕಪ್ಪುಹಣವ ಜೇಬಿಗಿಳಿಸುತ್ತಾ
ತಪ್ಪದೆ ಮಾಡುತ್ತಿದ್ದಾರೆ ಅಶ್ವಮೇಧ
ಬೆಪ್ಪು ಬಡವರ  ನರಮೇಧ .

ಲೇಖಕರು : ಕೆ ಕೃಷ್ಣಪ್ಪ

One thought on “ಆಳುವವರ ಅಶ್ವಮೇಧ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s